ಗಾಂಧಿನಗರದ ಎಲೆಕ್ಷನ್ ?ರಾಮು-ಮಾಲಾಶ್ರೀ ಆರ್ಪಣೆ
Posted date: 25 Sun, Nov 2012 ? 05:58:25 PM

ಇದೇನಪ್ಪ ಇದು ಗಾಂಧಿನಗರದಲ್ಲಿ ಚುನಾವಣೆಯೇ ಎಂದು ಹುಬ್ಬೇರಿಸಬೇಡಿ. ಗಾಂಧಿನಗರದ ಮಂದಿ ಚುನಾವಣೆಗೆ ನಿಂತಿದ್ದು ಗೊತ್ತೇ ಇದೆ. ನಾವು ಹೇಳ ಹೊರಟಿರುವುದು ‘ಎಲೆಕ್ಷನ್’ ಎಂಬ ಚಿತ್ರದ ಬಗ್ಗೆ. ಹೆಸರಾಂತ ನಿರ್ಮಾಪಕ ರಾಮು ಅವರು ರಾಮು ಎಂಟೆರ್ಪೃಸೆಸ್ ಬ್ಯಾನರ್ ಅಡಿಯಲ್ಲಿ ‘ಮುತ್ತಿನಂತ ಹೆಂಡತಿ’(1995 ರಲ್ಲಿ ರಾಮು ಅವರು ತಾಯರಿಸಿದ ಮಾಲಾಶ್ರೀ ಅಭಿನಯದ ಮೊದಲ ಚಿತ್ರ) ಮಾಲಾಶ್ರೀ ಮುಖ್ಯ ಭೂಮಿಕೆಯಲ್ಲಿ ಪಾತ್ರ ವಹಿಸುವ ಚಿತ್ರ ಡಿಸೆಂಬರ್ 7 ರಂದು ಭರ್ಜರಿ ಆಗಿ ಪ್ರಾರಂಭ ಆಗಲಿದೆ. ನಗರದ ಅಶೋಕ ಹೊಟೇಲ್ ಅಂದು ‘ಎಲೆಕ್ಷನ್’ ಪ್ರಾರಂಬೊತ್ಸವಕ್ಕೆ ಕನ್ನಡಿ ಹಿಡಿಯಲಿದೆ.

ಕನ್ನಡ ಚಿತ್ರರಂಗದ ಕನಸಿನ ರಾಣಿ ಇಂದು ಸಾಹಸ ಪ್ರವೃತ್ತಿಯ ಚಿತ್ರಗಳಿಂದ ‘ಆಕ್ಷನ್ ರಾಣಿ’ಆಗಿ ಪ್ರಖ್ಯಾತರಾಗಿರುವ ಮಾಲಾಶ್ರೀ ಅವರು ‘ಎಲೆಕ್ಷನ್’ ಚಿತ್ರದಲ್ಲಿ ಏನೇನು ಅಂಶಗಳನ್ನು ನಿರ್ದೇಶಕ ಓಂ ಪ್ರಕಾಷ್ ರಾವು ಅವರು ಸೆಲೆಕ್ಷನ್ ಮಾಡಿದ್ದಾರೆ ಎಂಬುದೇ ಕುತೂಹಲದ ವಿಚಾರ. ಸಾಹಸದ ಜೊತೆಗೆ ಸಮಾಜಕ್ಕೆ ಬೇಕಾದ ಇಂಜೆಕ್ಷನ್ ಅಂತೂ ಬರ್ಜರಿ ಮಟ್ಟದಲ್ಲಿ ಸಿಗುವುದಂತೂ ಸತ್ಯ.

‘ಲೇಡಿ ಕಮಿಷನರ್’ ಚಿತ್ರದಿಂದ ಸಾಹಸ ಪ್ರಧಾನ ಚಿತ್ರಗಳಿಗೆ ಗುರುತಿಸಿಕೊಂಡು ಯಶಸ್ಸನ್ನು ಕಂಡಿರುವ ಮಾಲಾಶ್ರೀ ಅವರು ಚಾಮುಂಡಿ, ದುರ್ಗಿ,
ಕನ್ನಡದ ಕಿರಣ್ ಬೇಡಿ, ಶಕ್ತಿ’ ಚಿತ್ರಗಳಲ್ಲಿ ಶಕ್ತಿ ಸಾಮರ್ಥ್ಯವನ್ನು ದಾರೆ ಎರೆದು ಇದೀಗ ‘ವೀರ’ ಹಾಗೂ ‘ಘರ್ಷಣೆ’ ಚಿತ್ರಗಳಲ್ಲಿ ತಮ್ಮ ಪ್ರಭಾವವನ್ನು ಪ್ರದರ್ಶಿಸುತ್ತಿರುವ ಕನ್ನಡದ ಏಕೈಕ ‘ಲೇಡಿ ಬಾಂಡ್’ ಎಂದು ಪ್ರಸಿದ್ದರಾಗಿರುವವರು ‘ಎಲೆಕ್ಷನ್’ ಸಿನೆಮಾದಲ್ಲಿ ಸಾಹಸ ಚಿತ್ರಗಳ ಸರ್ದಾರ ಎಂದೇ ಖ್ಯಾತಿ ಪಡೆದಿರುವ ನಿರ್ದೇಶಕ ಓಂ ಪ್ರಕಾಷ್ ರಾವು ಅವರ ನಿರ್ದೇಶನದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ಈ ಹಿಂದೆ ‘ಕನ್ನಡದ ಕಿರಣ್ ಬೇಡಿ’ ಚಿತ್ರವನ್ನೂ ಮಾಲಾಶ್ರೀ ಅಭಿನಯದಲ್ಲಿ ರಾವು ಅವರು ನಿರ್ದೇಶನ ಮಾಡಿದ್ದರು.

25 ಕ್ಕೂ ಹೆಚ್ಚು ಸಿನೆಮಗಳನ್ನು ನಿರ್ದೇಶನ ಮಾಡಿರುವ ಓಂ ಪ್ರಕಾಷ್ ರಾವು ಅವರು 32 ಚಿತ್ರಗಳಿಗೆ ಹೆಚ್ಚು ಸಿನೆಮಾ ನಿರ್ಮಾಣ ಮಾಡಿರುವ ಕೋಟಿ ರಾಮು ಎಂದು ಖ್ಯಾತಿ ಆದ ಇದೀಗ ಬಹು ಕೋಟಿ ನಿರ್ಮಾಪಕ ಆಗಿರುವ ಬ್ಯಾನರ್ ಅಡಿಯಲ್ಲಿ ‘ಲಾಕ್ ಅಪ್ ಡೆತ್, ಸಿಂಹದ ಮರಿ, ಏ ಕೆ 47, ಕಲಾಸಿಪಲ್ಯ ಹಾಗೂ ಕನ್ನಡದ ಕಿರಣ್ ಬೇಡಿ’ ಸಿನೆಮಗಳನ್ನು ನಿರ್ದೇಶನ ಮಾಡಿದವರು. ‘ಏಲೆಕ್ಷನ್’ ಚಿತ್ರಕ್ಕೆ ರಾವು ಅವರೇ ಚಿತ್ರಕಥೆ ಬರೆದಿದ್ದಾರೆ.

ಮುಂದಿನ ವರ್ಷ ಮಧ್ಯ ಬಾಗದಲ್ಲಿ ಬರುವ ರಾಜ್ಯ ವಿಧಾನ ಸಭಾ ಚುನಾವಣೆಗೂ ಮುಂಚೆ ಈ ‘ಎಲೆಕ್ಷನ್’ ತೆರೆಯ ಮೇಲೆ ಬರುವ ಎಲ್ಲ ಲಕ್ಷಣಗಳು ಇವೆ.

ಕನ್ನಡ ಚಿತ್ರರಂಗದ ರಾಗ ಬ್ರಹ್ಮ ಸಾಹಿತ್ಯದ ಸರದಾರ ರಾಷ್ಟ್ರ ಪ್ರಶಸ್ತಿ ವಿಜೇತ ಹಂಸಲೇಖ ಅವರು ಈ ಚಿತ್ರಕ್ಕೆ ಸಂಗೀತ ಹಾಗೂ ಸಾಹಿತ್ಯವನ್ನು ನೀಡಲಿದ್ದಾರೆ. ರಾಜೇಶ್ ಅವರ ಛಾಯಾಗ್ರಹಣ, ಮನೋಹರ್ ಅವರ ಸಂಕಲನ, ಆನಂದ್ ಅವರ ಸಂಭಾಷಣೆ, ಸರಿಗಮ ವಿಜಿ ಹಾಗೂ ಸೋಮರಜ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಪೋಷಕ ಪತ್ರಗಳಲ್ಲಿ ಶ್ರೀನಿವಾಸಮೂರ್ತಿ, ಲೋಕನಾಥ್, ಮೈಕೊ ನಾಗರಾಜ್, ಸುಚಿಂದ್ರಪ್ರಸಾದ್, ಶರತ್ ಲೋಹಿತಾಶ್ವ, ಸಾಧು ಕೋಕಿಲ, ಬುಲ್ಲೆಟ್ ಪ್ರಕಾಷ್, ಶೋಬಾರಾಜ್ ಹಾಗೂ ಇತರರು ಅಭಿನಯಿಸಲಿದ್ದಾರೆ.

 


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed